ಈ ಬ್ಲಾಗನ್ನು ಓದುವ ಹಲವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ನನ್ನ ಸೋಂಬೇರಿತನವನ್ನು ಮನ್ನಿಸಿ.
ಕನ್ನಡ ಚಿತ್ರಗೀತೆಗಳು ಹಾಗು ಪರಕೀಯ ಗಾಯಕರು ಎಂದು ಪ್ರಕಟವಾಗಬೇಕಿದ್ದ ಈ ಅಂಕಣವು ಹಂತ ಹಂತವಾಗಿ ತೆರೆದುಕೊಳ್ಳಲಿದೆ. ಇದಕ್ಕೆ ಪ್ರೇರಣೆ ಸೀನನ ಈ ಹಳೆಯ ಅಂಕಣ.
ಕನ್ನಡ ಚಿತ್ರಗೀತೆಗಳಲ್ಲಿ ಎಂದಿನಂತೆ ಪರಕೀಯ ಗಾಯಕರ ಹಾವಳಿ ಇದ್ದಿದ್ದೇ. ಇತ್ತೀಚಿನ ದಿನಗಳಲ್ಲಿ ಅದು ಇನ್ನು ಹೆಚ್ಚಿದೆ ಎನ್ನುವ ಮಾತು ಆಗಾಗ ಕೇಳಿಬರುತ್ತದೆ. ಇದರ ಇತಿಹಾಸವನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳೋಣ.
೧೯೩೪ನೇ ಇಸವಿಯಿಂದ ಪ್ರಾರಂಭವಾದ ಕನ್ನಡ ಚಿತ್ರರಂಗ, ಮೂಕಿಯಿಂದ ಟಾಕಿಯಾದದ್ದು ಸರಿ ಸುಮಾರು ೫೦ನೆ ದಶಕದಲ್ಲಿ ಎಂದು ಹಲವರ ಅಂಬೋಣ. [ಆಸಕ್ತರು ಜಾಲದಲ್ಲಿ ಹುಡುಕಾಡಿ] ಆಗಿನ ಕಾಲದಿಂದಲೂ ಕನ್ನಡದಲ್ಲಿ ಪರಕೀಯರ ಹಾಡುಗಾರಿಕೆಯೇ. ಸೀರ್ಕಾಳಿ ಗೋವಿಂದನ್, ಘಂಟಸಾಲ, ಪಿ ಸುಶೀಲ, ಹಲವರು. ಆಗಿನ ಕಾಲದಲ್ಲಿ ಕರ್ನಾಟಕದಲ್ಲಿ ಸ್ಟೂಡಿಯೋ ವ್ಯವಸ್ತೆಯಿಲ್ಲದಿರುವುದೂ ಇದಕ್ಕೆ ಒಂದು ಪ್ರಮುಖ ಕಾರಣವಾಗಿರಬಹುದು. ಇದೇ ಸಾಲಿನಲ್ಲಿ ಬರುವವರು ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ, ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಪಿ. ಶೈಲಜಾ, ಎಲ್. ಆರ್. ಈಶ್ವರಿ, ವಾಣಿ ಜಯರಾಂ, ಕೆ. ಎಸ್. ಚಿತ್ರ, ಕೆ. ಜೆ. ಏಸುದಾಸ್, ಇನ್ನು ಹಲವರು.
ಇವರೆಲ್ಲ ದಕ್ಷಿಣ ಭಾರತದ ಪ್ರಮುಖರಾಯ್ತು.
ಉತ್ತರ ಭಾರತದವರ ಕಡೆ ಮುಖ ಮಾಡಿದರೆ ನಮಗೆ ಸಿಗುವುದು, ಮೊಹಮ್ಮದ್ ರಫಿ (ಒಂದು ಹಾಡು), ಕಿಶೋರ್ ಕುಮಾರ್ (೧ ಹಾಡು), ಲತಾ ಮಂಗೇಶ್ಕರ್ (೧ ಹಾಡು) ಆಶಾ ಭೋಂಸ್ಲೆ (೧ ಹಾಡು), ಮನ್ನಾ ಡೇ (೨-೩ ಹಾಡು). ಇವರೆಲ್ಲ ಹಳಬರು. ಹೊಸಬರಲ್ಲಿ ಕುಮಾರ್ ಸಾಣು, ಉದಿತ್ ನಾರಾಯಣ್, ಸೋನು ನಿಗಮ್, ಅಲ್ಕಾ ಯಾಗ್ನಿಕ್, ಸಾಧನ ಸರ್ಗಂ, ಕುನಾಲ್ ಗಾಂಜಾವಾಲ, ಅನುರಾಧ ಪೌದ್ವಾಲ್, ಕವಿತಾ ಕೃಷ್ಣಮೂರ್ತಿ, ಶ್ರೇಯಾ ಘೋಶಾಲ್, ಕೈಲಾಶ್ ಖೇರ್, ಶಾನ್ ಪ್ರಮುಖರು.
ಇವರ ಬಗ್ಗೆ ಇನ್ನೊಮ್ಮೆ ಯಾವಾಗಲಾದರು ಹೇಳಿದರಾಯ್ತು. ಈಗ ಈ ಅಂಕಣದ ಕೇಂದ್ರ ಬಿಂದು, ಸೋನು ನಿಗಮರ ಬಗ್ಗೆ ಬರೆಯೋಣ.
ಹೆಚ್ಚಿನ ಪಕ್ಷ ಉತ್ತರ ಭಾರತದ ಎಲ್ಲರೂ ಮೂಗಿನಿಂದಲೇ ಹಾಡುತ್ತಾರೆ. ಶ್ರೇಯಾ ಘೋಶಾಲ್ ಒಬ್ಬರು ಅಪವಾದ. ನಮ್ಮ ಸೋನು ನಿಗಮರಂತು ಮೂಗೀಶ್ವರನ ಅಪರಾವತಾರ. ಸರಿ ಸುಮಾರು ೨೦೦೦ ನೇ ಇಸವಿಯಿಂದ ಕನ್ನಡದಲ್ಲಿ ಹಾಡಲು ಬಂದ ಸೋನುವನ್ನು ಇಲ್ಲಿಯ ಹೆಚ್ಚಿನ ಜನ ಅಭಿನಂದಿಸಿದರು. ಸೋನು, ಹಿಂದಿಯಲ್ಲಿ ಉತ್ತಮ ಹಾಡುಗಾರ ನಿಜ. ಆದರೆ ಅವರನ್ನು ಕನ್ನಡಕ್ಕೆ ತಂದವರು ಕನ್ನಡದ ಉಚ್ಚ್ಹಾರವನ್ನು ಸರಿಯಾಗಿ ಕಲಿಸದೇ ಹಾಡಿಸುವುದು ಅಪರಾಧವೇ ಸರಿ.
೨೦೦೬ ನೇ ಇಸವಿಯ ತನಕ ವರ್ಷಕ್ಕೆ ೨-೩ ಕನ್ನಡ ಹಾಡುಗಳನ್ನು ಹಾಡುತ್ತಿದ್ದ ಸೋನು, ಏಕ ದಂ, ಪ್ರಸಿದ್ಧರಾದದ್ದು ಮುಂಗಾರು ಮಳೆಯ ಹಾಡುಗಳಿಂದ.
೨೦೦೬ರ ತನಕ ಸೋನು ನಿಗಮರ ಕೆಲವು ಪ್ರಸಿದ್ಧ ಕನ್ನಡ ಹಾಡುಗಳೆಂದರೆ:
೧. ಟೈಟಾನಿಕ್ ಹೀರೋಯಿನ್ ನನ್ನ ಚೆಲುವೆ (ಚಿತ್ರ: ಸ್ನೇಹ ಲೋಕ, ಸಾಹಿತ್ಯ, ಸಂಗೀತ: ಹಂಸಲೇಖ)
೨. ಮೊನಾಲೀಸಾ ಮೊನಾಲೀಸಾ (ಚಿತ್ರ: ಮೋನಲೀಸ, ಸಂಗೀತ: ವಲೀಶ ಸಂದೀಪ್)
೩. ಅಂಟ್ ಅಂಟ್ ಅಂಟ್ (ಚಿತ್ರ: ಸೂಪರ್ ಸ್ಟಾರ್, ಸಾಹಿತ್ಯ, ಸಂಗೀತ: ಹಂಸಲೇಖ)
೪. ಉಸಿರೇ, ಉಸಿರೇ (ಚಿತ್ರ: ಹುಚ್ಚ, ಸಂಗೀತ: ರಾಜೇಶ್ ರಾಮನಾಥ್)
ನಿಮಗೆ ತಿಳಿದಿರುವ ಹಲವಾರು ಹಾಡುಗಳನ್ನು ನಾನು ಬಿಟ್ಟಿರಬಹುದು. ಕ್ಷಮೆಯಿರಲಿ.
ಈ ಮೇಲ್ಕಂಡ ಹಾಡುಗಳೆಲ್ಲದರ ಸಾಹಿತ್ಯ, ಎಷ್ಟು ಬಾರಿ ಕೇಳಿದರು ಬೇಜಾರಾಗುವುದಿಲ್ಲ. (ನನ್ನ ಅಭಿಪ್ರಾಯದಲ್ಲಿ ೪ ನೇ ಹಾಡು, ಉಸಿರೇ, ಉಸಿರೇ ಕೂಡ ಕೇಳಲಾಗುವುದಿಲ್ಲ, ಆದರೆ ಹಲವರಿಗೆ ಹಾಗನ್ನಿಸುವುದಿಲ್ಲ, ಇರಲಿ...)
ಆದರೆ ಈ ಮುಂಗಾರು ಮಳೆ ಚಿತ್ರ ಬಂತು ನೋಡಿ, ಅದರ ಹಾಡುಗಳು ಪ್ರಸಿದ್ಧವಾಗಿದ್ದೆ ಆಗಿದ್ದು, ಸೋನು ನಿಗಮರ ಕನ್ನಡ ಹಾಡುಗಾರಿಕೆ ಬೇರೆಯದೇ ಮಟ್ಟವನ್ನು ಮುಟ್ಟಿತು. ಆ ಚಿತ್ರವನ್ನು ಜನ ಅದ್ಯಾಕೆ ಅಷ್ಟು ಹಚ್ಚಿಕೊಂಡರು ಎಂದು ನನಗೆ ಇನ್ನೂ ಸ್ಪಷ್ಟವಾಗಿಲ್ಲ. ಆ ಚಿತ್ರದಲ್ಲಿ ಇಷ್ಟವಾಗಬಹುದಾದದ್ದು ಒಂದಿದ್ದರೆ ಅಲ್ಲಿನ ಛಾಯಾಗ್ರಹಣ. ಅದೊಂದು ಬಿಟ್ಟರೆ ಆ ಚಿತ್ರದ ಗಣೇಶ್, ಪೂಜಾ ಗಾಂಧಿ ಅಭಿನಯವಾಗಲಿ, ಮನೋ ಮೂರ್ತಿಗಳ ಸಂಗೀತವಾಗಲಿ, ಯೋಗರಾಜಭಟ್ಟರ ನಿರ್ದೇಶನವಾಗಲಿ, ಭಟ್ಟರ ಹಾಗು ಕಾಯ್ಕಿಣಿಯವರ ಸಾಹಿತ್ಯವಾಗಲಿ ದೈನ್ಯವೆನ್ನಿಸುತ್ತದೆ. ಕಥೆಯಂತೂ ಬಾಲಿಶವಾಗಿದೆ. ಇರಲಿ ಬಿಡಿ. ನಾವು ಈಗ ಮುಂಗಾರು ಮಳೆಯ ವಿಮರ್ಶೆ ಮಾಡುತ್ತಿಲ್ಲ.
ಇದಾದನಂತರ ಬಂದ ಸೋನು ನಿಗಮರ ಕೆಲವು ಹಾಡುಗಳ ಸಾಹಿತ್ಯದ ಬಗ್ಗೆ ನಾನು ಬರೆಯಲಿಚ್ಚಿಸುತ್ತೇನೆ. ಇಲ್ಲಿ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ನನಗೆ ಇಲ್ಲಿ ಜಯಂತ ಕಾಯ್ಕಿಣಿಯವರ ಬಗ್ಗೆ ಅಪಾರ ಗೌರವವಿದೆ. ಮನೋ ಮೂರ್ತಿ ಹಾಗು ಸೋನು ನಿಗಮರ ಬಗ್ಗೆ ಯಾವುದೇ ವೈಷಮ್ಯವಿಲ್ಲ. ಹಾಗೆಯೇ ಈ ಹಾಡುಗಳನ್ನು ಹೊರತರುವಲ್ಲಿ ಕಷ್ಟಪಟ್ಟ ಎಲ್ಲರ ಬಗ್ಗೆ ನನ್ನ ಗೌರವ, ಸಹಾನುಭೂತಿ, ಕಳಕಳಿ ಇದೇ. ಯಾರೂ ಅನ್ಯತಾ ಭಾವಿಸಬಾರದೆಂದು ವಿನಂತಿ.
ಮೊದಲೇ ಹೇಳಿದಂತೆ, ಮುಂಗಾರು ಮಳೆಯ ನಂತರ ಬಂದ ಹೆಚ್ಚಿನ ಸೋನು ಹಾಡುಗಳು ಒಂದೇ ಕಾಯ್ಕಿಣಿಯವರು ಬರೆದದ್ದು ಅಥವಾ ಮನೋ ಮೂರ್ತಿ ಸಂಗೀತ ಸಂಯೋಜಿಸಿದ್ದು ಅಥವಾ ಎರಡೂ. ಇತರರೂ ಮಾಡಿದ್ದಾರೆ ಆದರೆ ಇವರುಗಳು ಜಾಸ್ತಿ. ಈ ಎಲ್ಲಾ ಹಾಡುಗಳಲ್ಲಿ ಒಂದು ಪ್ರಮುಖ ಗುಣ, ಹಾಡಿನ ದೈನ್ಯತೆ. ಹೆಚ್ಚಿನ ಪಕ್ಷ ಎಲ್ಲ ಹಾಡುಗಳಲ್ಲಿಯೂ ದೈನ್ಯತೆ ಎದ್ದು ಕಾಣುತ್ತದೆ. ಹಲವನ್ನು ಇಲ್ಲಿ ಉದಾಹರಿಸುತ್ತೇನೆ.
೧. ಚಿತ್ರ: ಮುಂಗಾರು ಮಳೆ
ಹಾಡು: ಅನಿಸುತಿದೆ ಯಾಕೋ ಇಂದು...
ಸಾಹಿತ್ಯ: ಜಯಂತ್ ಕಾಯ್ಕಿಣಿ.
ಸಂಗೀತ: ಮನೋ ಮೂರ್ತಿ.
ದೈನ್ಯತೆಯ ಪರಮಾವಧಿಯ ಸಾಲುಗಳು: "ನೀನೇನೆ ನನ್ನವಳೆಂದು..." "ಇನ್ನ್ಯಾರ ಕನಸಲೋ ನೀನು ಬಂದರೆ ತಳಮಳ" "ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ"
೨. ಚಿತ್ರ: ಗಾಳಿಪಟ
ಹಾಡು: ಮಿಂಚಾಗಿ ನೀನು ಬರಲು
ಸಂಗೀತ: ಹರಿಕೃಷ್ಣ
ದೈನ್ಯತೆಯ ಪರಮಾವಧಿ: "ನಾ ನಿನ್ನ ಕನಸಿಗೆ ಚಂದಾದಾರನು, ಚಂದಾ ಬಾಕಿ ನೀಡಲು ಬಂದೇ ಬರುವೆನು"
ನನ್ನ ಅನಿಸಿಕೆ: ಅಯ್ಯೋ ಬೇಡ ಬಿಡು ಗುರು. ನಿಂಗ್ ಫ್ರೀಯಾಗೆ ಕೊಡ್ತೀನಿ. ನನ್ನ ಗೆಳೆಯ ಸೀನ ಇದಕ್ಕೆ ಅಣಕ ಹಾಡಿದ್ದ. "ನಾ ನಿನ್ನ ಚಪ್ಪಲಿಯ ಚಮ್ಮಾರನು, ಕಿತ್ತೋದ್ ಚಪ್ಪಲಿ ಹೊಲಿಯಲು ಬಂದೇ ಬರುವೆನು... ಯಪ್ಪಾ!!)
೩. ಚಿತ್ರ: ನವಗ್ರಹ
ಹಾಡು: ಕಣ್ಣ ಕಣ್ಣ ಸಲಿಗೆ
ಸಂಗೀತ: ಹರಿಕೃಷ್ಣ
ದೈನ್ಯತೆಯ ಪರಮಾವಧಿ: ಇಡೀ ಹಾಡೇ ದೈನ್ಯವಾಗಿದೆ. ಅದರಲ್ಲಿಯೂ ಎರಡನೆಯ ಚರಣದಲ್ಲಿ "ಪ್ರೀತೀ ಮಾಡೇ" ಅಂತೂ ಅರಚಿಕೊಳ್ಳುವಂತಿದೆ. ಈ ಹಾಡು ಕೇಳಿದಾಗಲೆಲ್ಲ ಮೈ ಪರಚಿಕೊಳ್ಳುವಂತಾಗುತ್ತದೆ.
೪. ಚಿತ್ರ: ಸರ್ಕಸ್
ಹಾಡು: ಪಿಸುಗುಡಲೇ... ಸವಿ ಮಾತೊಂದ...
ಸಂಗೀತ: ಎಮಿಲ್
ದೈನ್ಯತೆಯ ಪರಮಾವಧಿ: ಅಸಂಬದ್ಧ ಕಲ್ಪನೆಗಳು. "ನನ್ನ ನೂರು ಆಸೆಗೆಲ್ಲ, ಕೋಟಿ ಕೋಟಿ ಬಣ್ಣಗಳ ಕನಸಿನ ಅಂಗಿಯ ತೊಡಿಸಿ...."
ಅಣಕ: ಇನ್ನ್ ಏನ್ ಏನ್ ಆಸೆ ಎಲ್ಲ ಇಟ್ಟುಕೊಂಡು ಇದ್ದೀಯ ಸಿವಾ?
೫. ಚಿತ್ರ: ಮಳೆಯಲಿ... ಜೊತೆಯಲಿ...
ಹಾಡು: ನೀ ಸನಿಹಕೆ ಬಂದರೆ...
ಸಂಗೀತ: ಹರಿಕೃಷ್ಣ
ದೈನ್ಯತೆಯ ಪರಮಾವಧಿ: ಶೀರ್ಷಿಕೆಯೇ ಹೇಳುತ್ತದೆ. "ನೀ ಸನಿಹಕೆ ಬಂದರೆ ಹೃದಯದ ಗತಿ ಏನು?"
ಅಣಕ: ಹುಡ್ಗೀರ, ಇವನ್ ಹತ್ರ ಹೋಗಬೇಡಿರಮ್ಮ.
ಹೇಳುತ್ತಾ ಹೋದರೆ ಈ ಸರತಿ ತುಂಬಿ ಹೋಗಬಹುದು. ಸೋನು, ಮನೋ, ಕಾಯ್ಕಿಣಿ ತ್ರಯರು ಹೊರತಂದ ಆಲ್ಬಮ್ "ನೀನೆ, ಬರಿ ನೀನೆ" ಅಲ್ಲಿ ದೈನ್ಯತೆಯನ್ನು ಯಥೇಚ್ಚವಾಗಿ ಕಾಣಬಹುದು. ಇದರಲ್ಲಿ ಇನ್ನು ಹಲವು ಗಾಯಕರ ಪಾತ್ರವೂ ಇದೇ. ಆದರೆ ಸೋನು ನಿಗಮ್ ಎಲ್ಲರನ್ನು ಮೀರಿಸಿದ್ದಾರೆ. ದೈನ್ಯತೆಯಲ್ಲಿ.
ಮೇಲೆ ಹೇಳಿದ ಹಾಡುಗಳು ಶೇಕಡಾ ೯೮% ಜನರಿಗೆ ಅಚ್ಚು ಮೆಚ್ಚು. ಅದು ಅವರ ಇಚ್ಛೆ. ನನ್ನ ಅಭಿಪ್ರಾಯವನ್ನು ಇಲ್ಲಿ ನಿರ್ದಾಕ್ಷಿಣ್ಯವಾಗಿ ಮಂಡಿಸಿದ್ದೇನೆ. ಅಂಕಣವನ್ನು ಓದಿ ನೋವಾಗಿದ್ದರೆ ಕ್ಷಮೆಯಿರಲಿ.
ಕೊನೆಯದಾಗಿ ಒಂದು ಮಾತು. ಈ ಎಲ್ಲ ಹಾಡುಗಳನ್ನು ಇಷ್ಟಪಡುವವರು ದೈನ್ಯತೆಯೇ ಸಂಗೀತ, ದೈನ್ಯತೆಯೇ ಮಾಧುರ್ಯವೆಂದು (Melody) ತಿಳಿದಿದ್ದಾರೆ. ಹಾಗೆಂದು ಘಂಟಾಘೋಷವಾಗಿ ಎಲ್ಲ ಕಡೆ ಹೇಳಿಕೊಂಡು ಬರುತ್ತಾರೆ. ಇಂಥವರಿಗೆ ನನ್ನದೊಂದು ಸಲಹೆ. ದೈನ್ಯತೆಯನ್ನು ಮೀರಿ ಸಂಗೀತವಿದೆ. ಅದರಲ್ಲಿ ಬರಿಯ ಸಂತೋಷವಿದೆ. ಉದಾಹರಣೆಗೆ ಹಂಸಲೇಖರ ಹಾಡುಗಳನ್ನು ಕೇಳಿ, ಸಾಧು ಕೋಕಿಲರವರ ಹಲವು ಹಾಡುಗಳನ್ನು ಕೇಳಿ. (ಹೌದು, ಸಾಧು ಅವರು ಕೆಲವು ಹಾಡುಗಳನ್ನು ಅಚ್ಚು ಇಳಿಸುತ್ತಾರೆ. ಆದರೂ ಅವರ ಹಲವು ಹಾಡುಗಳಲ್ಲಿ ಆನಂದವಿದೆ, ಉದಾ: ಗಂಡುಗಲಿಯ ಹಾಡುಗಳು, ಸವ್ಯಸಾಚಿಯ ಹಾಡುಗಳು, ನೋ. ೧ ಚಿತ್ರದ ಹಾಡುಗಳು, ಇಂತಿ ನಿನ್ನ ಪ್ರೀತಿಯ ಹಾಗು ದೇವ್ರು ಚಿತ್ರದ ಹಾಡುಗಳು) ಕೇಳಿ ನೋಡಿ. ಈ ಹಾಡುಗಳಲ್ಲಿ ದೈನ್ಯತೆ ಇಲ್ಲ. ಹಾಗೆಂದು ಇವರಾರೂ ದೈನ್ಯತೆಯ ಹಾಡುಗಳನ್ನು ಮಾಡಿದವರೇ ಅಲ್ಲವೆಂದಲ್ಲ. ಅತಿ ವಿರಳ. ಇಲ್ಲವೆಂದೇ ಹೇಳಬಹುದು. ವಯ್ಯಕ್ತಿಕವಾಗಿ ನನಗೆ ಇಂತಹ ಹಾಡುಗಳು ಇಷ್ಟವಾಗುತ್ತವೆ.
ಸರಿ. ಸೋನು (ನೋಸು??) ನಿಗಮರ ಅಭಿಮಾನಿಗಳೇ, ಅನಿಸಿಕೆ ಬರೆಯಲು ತಯಾರಾ?
Subscribe to:
Post Comments (Atom)
13 comments:
sonu nigam na ishta padadhe iroru obbru sikkirlilla guru nange.. neenobba devru sikkdang sikkde.. olle abhiruchi ide thamage... manomurthy gintha sadhu kokila na olle music director andralla.. keli kivi paavana aytu...
idanna vyaagyavaagi heliddeero athawa nijavaagi heliddeero nange gottagta illa. nijavaage heliddeeri antha andkoteeni. Dhanyavaadagalu. =)
cinema haadugalu neevu heluvante bari sangeeta praakara alla. adondu bhaavuka lokada srushtiya prayatna. adaralli raaga, saahityada jotege..katheya sandarbha..novu nalivu...ashte allade kelugara bhaavuka paridhi, jeevana anubhava, nireekshe ivella kooda pradhaana paatra vahisuttade....premadallina dainyate vyaavaharika ego-galannu meerida nirmala bhaava...neevu innoo praveshisalaagada lokada bagge bareyalu prayatnisideeri annabahudashte....naanu blog-gala bagge gamana harisuvudilla, thatskannada-dalli achaanakaagi nimmannu bhetiyaade. Best Wishes.
-Dinesh Udupi
@Dinesh Udupi - Neevu heluva katheya sandardha, novu nalivu, bhavuka paridhi, jeevanaanubhavagalannu sangeetadalliyoo chitrisabahudashte.
premadalli dainyateyiddare adu nijavaagiyoo premavaagiralaaradu. adu mohavendenisuttade. Dainyateyannu meerida bhaavavondu premadalliruvudendu nanna bhaavane.
Innoo praveshisada lokavennutteeralla? Naanu aa lokavannu praveshisilla nija, praveshisalu icchisuvudoo illa. Aadare naanu aa lokavanu anubhavisiye illavendalla. Nanna geleyaru halavaru aa lokadalli oddaaduvudannu naanu nodiddene. Nanage idu kshullakavennisuttade. Nimmannu heegaleyuvudu nanna uddeshavalla. Lokobhinna ruchi.
nanna blogannu odiddakkaagi dhanyavaadagalu. Purusotthiddaaga bheti kodi endu maatra helaballe. =)
deer sonu your my favourite singer. I think god made for you singig the songs,especially kannada songs.
Whatever...
Sonu is the best singer no doubt, but as far as Kannada songs concerned, the way he sing a song is not good. Take a example and listen carefully the songs of Mungarumale..... Anisuthide yako indu....In middle order he should sing "Anisuthide but he sung Hanisuthide". This is little example.
very good
ಸೋನು ನಿಗಮ್ ಅವರು `ಮುಂಗಾರು ಮಳೆ `ಚಿತ್ರದಲ್ಲಿ "ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ..." ಎನ್ನುವುದರ ಬದಲಾಗಿ "ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆದ್ದು...." ಎಂದು ಹಾಡಿದ್ದಾರೆ.ಕೇಳುಗರು ಸೂಕ್ಷ್ಮವಾಗಿ ಗಮನಿಸಬಹುದು
hello guru... namaskara.. sonu nigam avara bagge intha mathu keltha irodu ide modlu.. nijwaglu neev haadu keli mathadta iddiro illa sonuge kannada gottilla antha avru heege hadtare antha guess madi maathadta iddiro gottagta illa.. idi karnatakada jana avra fans agirodakke avru involvement haagu avra kannada pronounciation ne kaarana..
@Ganesh - avr haad keline ee thara bardirodu guru. Idee Karnatakadalli avarige abhimaanigalu irabahudu. Nanna anisike helkonde ashte.
Blog olle reethinalle start aaythu..
Aadre hogtha hogtha ello daari thappithu annisthu..
Haadinalli dainyathe.. nimma anisike na naanu poorthiyaagi opkotheeni..
Itheechege film haadugalalli ondu trend ide.. prathi chitrada ondu haadu.. janopayogi padagalannu thegedu asambaddhavaagi ottige serisi haadisodu..
"hale paatre hale kabbina hale paper thara hoyy!!!" yenu antha inna artha aagilla..
next ondu haadu, kaikini lyrics, sonu haadodu.. idakke examples kodo agathyaane illa..
but ee hadugalallina dainyathe gu nimm sonu melina comment gu sambandha illa ansuthe..
dainyathe na haadalli tumbisiddu, kaikini avaru.. raaga haakiddu yaaro music director.. haadu haadiddu sonu.. adara maatrakke avaranna dooshisodu sari illa.. nan prakaara avarige aa haadina artha kooda gottirutho ilvo gottilla..
Sonu itheechege hechu kannada haadu helthaare annodu optheeni.. aadare nanna asahane irodu inna haleya gayakaru..
neevu "yede tumbi haaduvenu" kaaryakramada moda modala kanthugalannu nodiddare/keliddare, maany SPB avara kannadada alpa gyaana gottaguthe.. 20 varsha kannadadalle sumaaru 3-4000 haadu haairo inthavre ashtu kettadaagi kannada maataadidre, sonu north indian accent alli kannada haadu haadodu yenoo thappilla..
and lastly saadhu kokila better than mano murthy? yaav basis mele compare maadtheero nange gottila.. ibbaradu bereye reethiya sangeetha (genre).. aadaru helodaadre... sadhu kaddiro haadugala munde mano oorthy avara dainyatheya raagagale ati uchcha vaadavu.. adanna oppale beku..
thanks :)
@Anonymous: Nimma aalochanegalannu bhaagashaha opputtene. Haadu Kaikiniyavaru baredaroo gaayakana dhwani adakke jeeva tumbuttade. Haageye dainyateya paramaavadhiyannu torisuvudu gaayakana meleye iruttade. Adakkaagi hecchina sangeeta nirdeshakaru sonuve sooktavendu nirdhaara maadidantide.
Sonu ge artha tilidillavendu nanage annisuvudilla. haadugaara adara bhaavannu grahisiye haadabekaaguttade.
Innu aa hale pathre , hale kabbna tharada haadugalu ittheechina trend. Yogaraja bhattru antha haadugalannu barey(s)uvudaralli nisseemaru. aa prashneyannu avarige kelabeku. aadaroo aa haadina artha pallaviyalle ide. hale pathre, kabbinada tharaha preethi premavu bejaaru endu.
SPB avara Kannada ajnaanavannu naanu gamanisiddene haagu khandisuttene.
innu Sadhu Kokila kelavu haadugalannu bhatti ilisuvudu ellarigoo tilidiruva vishayave. aadare avara kai chalakadalli kelavu sumadhura haadugalu bandive. Mano murthygintha Sadhu bhinna embudu nanna vayyaktika abhipraayave horatu ade kadeya maatalla. Mano murthy hecchaagi dainyateya sangeetavannu koduttare, aa nittinalli Sadhu kokila eshto melu embudu nanna ambona.
Nimma abhipraayakke vandanegalu. heege bareyuttiri.
Post a Comment