ಸುಮ್ನೆ ಓತ್ಲಾ ಹೊಡ್ಕೊಂಡ್ ಕೂತಿದ್ದ.
ಏನೋ ಯೋಚನೆ ಬಂತು. ಮತ್ತೆಲ್ಲಿ ಕಳ್ದುಹೊಗತ್ತೋ ಅಂತ ತನ್ನ ಹಳೇ ಮೊಬೈಲಲ್ಲಿ ಅದನ್ನ ಗುರುತು ಹಾಕ್ಕೊಂಡ.
ಇಂಟರ್ನೆಟ್ ಆಕ್ಸೆಸ್ ಸಿಕ್ಕ ತಕ್ಷಣ ಸಿಕ್ಕ ಸಿಕ್ಕ ಸೈಟಲ್ಲಿ ತನಗೆ ಹೊಳೆದ ವಿಚಾರ ಬರ್ಕೊಂಡ.
ಇನ್ನು ಶುರು ಆಯ್ತು ನೋಡಿ ನಮ್ಮ ಹುಡುಗನ ಪೇಚಾಟ. ಗಂಟ್ ಗಂಟೆಗ್ ಒಂದ್ ಸರ್ತಿ ಚೆಕ್ ಮಾಡೋದು,
ಯಾರ್ ಲೈಕ್ ಮಾಡಿದ್ದಾರೆ?
ಏನ್ ಕಾಮೆಂಟ್ ಬಂದಿದೆ?
ತಾನು ಯಾರನ್ನ ದೃಷ್ಟಿಲಿ ಇಟ್ಟ್ಕೊಂಡು ಅದನ್ನ ಬರ್ದಿದ್ದ್ನೋ, ಅವ್ರು ಅದನ್ನ ನೋಡಿ ಇಷ್ಟ ಪಟ್ಟಿದ್ದಾರಾ?
ಹೀಗೆ ಯಾವಾಗ್ಲೂ ಚೆಕ್ ಮಾಡ್ಕೊಂಡ್ ಬಿದ್ದಿರಕ್ಕೆ ಶುರು ಹಚ್ಚ್ಕೊಂಡ...
ಏನೋ ಚೂರು ಪಾರು ಜನ ಇವನ್ ಕ್ಲೋಸ್ ಫ್ರೆಂಡ್ಸು 'ಸೂಪರ್ ಲೈಕ್', 'ROFL', ಅಂದ್ಕೊಂಡ್ಎಲ್ಲಾ ಲೈಕೂ ಕಾಮ್ಮೆಂಟು ಬಿಸಾಕಿದ್ರು.
ಇವನಿಗೆ ಸಮಾಧಾನ ಆಗ್ಲಿಲ್ಲ. ಛೆ! ನನ್ನ ಯೋಚನೆಗಳು ನನ್ನ ಫ್ರೆಂಡ್ಸ್ ಯಾರಿಗೂ ಅಷ್ಟ್ ಅರ್ಥ ಆಗೋದೇ ಇಲ್ಲ ಅಂತ ಸುಮ್ನಾಗೋದ .
ರಾತ್ರಿ ಕಳೆದು ಬೆಳಿಗ್ಗೆ ಆಯ್ತು. ಇವನ್ ಫ್ರೆಂಡ್ ಫ್ರೆಂಡ್ ಒಬ್ಬ ಇವ್ನ್ ಸ್ಟೇಟಸ್ ನೋಡಿ ಇಷ್ಟ ಪಟ್ಟು ತನ್ನ ಗೆಳೆಯರ ಜೊತೆ ಇವನನ್ನೂ ಟ್ಯಾಗ್ ಮಾಡಿ ಹಂಚಿದ್ದ.
ಇವನಿಗೆ ಸ್ವಲ್ಪ ಖುಷಿ ಆಯ್ತು, ಓಹ್!! ನನ್ನ ಯೋಚನೆಗಳು ಇನ್ನು ಹೊಸ ಜನರಿಗೆ ತಲ್ಪುತ್ತೆ ಅಂದ್ಕೊಂಡು ಬೀಗಿದ.
ಹೀಗೆ ಗುರ್ತು ಪರಿಚಯ ಇಲ್ದೆ ಇರೋ ೨೦ - ೩೦ ಜನ ಇವ್ನ್ ಬರ್ದಿದ್ದು ನೋಡಿ ಇಷ್ಟ ಪಟ್ಟಿದ್ದ್ರು. ಫುಲ್ ಖುಷ್ಹು ಹುಡ್ಗ. ಹಿರಿ ಹಿರಿ ಹಿಗ್ಗ್ದ.
ಸಾಯಂಕಾಲದ ಹೊತ್ತಿಗೆ ಇವನ್ ಇನ್ನೊಬ್ಬ ಫ್ರೆಂಡು ಅದೇ ಯೋಚನೇನ ತನ್ನದು ಅಂತ ಹಾಕ್ಕೊಂಡಿದ್ದ. ಆ ವಿಚಾರನೂ ಇವನಿಗೆ ಗೊತ್ತಾಗಿದ್ದು ಇನ್ನೊಬ್ಬ ಫ್ರೆಂಡ್ ಇಂದ.
ವಿಚಾರಿಸ್ಕೊಂಡು ಮೂಲಕ್ಕೆ ಬಂದ್ರೆ ಹೀಗೆ ಹಂಚಿ ಹಂಚಿ ಯಾರೋ ಇವನ್ ಪೋಸ್ಟ್ ಗೆ ಇವನ್ ಹೆಸರನ್ನೇ ಹೊಡೆದ್ ಹಾಕಿ ಅವನ್ ಹೆಸರು ಹಾಕ್ಕೊಂಡಿದ್ದ.
ಬೇಜಾರಾಗಿ ತಿರ್ಗ ಓತ್ಲಾ ಹೊಡಿಯಕ್ಕೆ ಶುರು ಹಚ್ಚ್ಕೊಂಡ.

1 comment:
http://manadamaatu.blogspot.in/
Post a Comment